ನಮಸ್ಕಾರ ಸ್ನೇಹಿತರೆ , ದೇಶದಲ್ಲಿರುವಂತಹ ಪ್ರತಿಯೊಬ್ಬ ಸರ್ಕಾರಿ ನೌಕರರು ಉದ್ಯೋಗಿ ಭವಿಷ್ಯ ನಿಧಿ ಎಂಬ ಖಾತೆಯನ್ನು ಹೊಂದಿರುತ್ತಾನೆ. ಈ ಒಂದು ಖಾತೆಯು ನಿವೃತ್ತಿಯ ನಂತರದ ಜೀವನಕ್ಕಾಗಿ ವಿನ್ಯಾಸಗೊಳಿಸಲಾಗಿದ್ದು ಈ ಒಂದು ಯೋಜನೆಯಲ್ಲಿ ಖಾತೆಯನ್ನು ತೆರೆದು ಹಣವನ್ನು ಹೂಡಿಕೆ ಮಾಡಬಹುದಾಗಿದೆ. ಈಗ 1ಲಕ್ಷ ವಿತ್ ಡ್ರಾ ಮಾಡಲು ಅವಕಾಶ.
ಈ ಒಂದು ಯೋಜನೆಯನ್ನ ಕೇಂದ್ರ ಸರ್ಕಾರದ ಅಡಿಯಲ್ಲಿ ನೌಕರರ ಭವಿಷ್ಯ ನಿಧಿ ಸಂಸ್ಥೆ ನಿರ್ವಹಿಸಲಿದೆ. ಆದರೆ ಅಗತ್ಯ ಸಂದರ್ಭದಲ್ಲಿ ಹಣದ ಅವಶ್ಯಕತೆ ಇದ್ದಾಗ ಈ ಒಂದು ಖಾತೆಯಿಂದ ಹೇಗೆ ಹಣವನ್ನು ತೆಗೆದುಕೊಳ್ಳಬಹುದು ಎಂಬುದರ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.
ನೌಕರರ ಭವಿಷ್ಯ ನಿಧಿ ಖಾತೆ :
ಕೇಂದ್ರ ಸರ್ಕಾರದ ಅಡಿಯಲ್ಲಿ ನೌಕರರ ಭವಿಷ್ಯ ನಿಧಿ ಸಂಸ್ಥೆಯನ್ನು ನಿರ್ವಹಿಸಲಾಗುತ್ತದೆ. ಸರ್ಕಾರಿ ನೌಕರರ ವೇತನದಲ್ಲಿ ಪ್ರತಿ ತಿಂಗಳು ಅದರ ಒಂದು ಭಾಗವನ್ನು ಅವನು ಕೆಲಸ ಮಾಡುವಂತಹ ಕಂಪನಿಯಿಂದ ಪಾವತಿ ಮಾಡಲಾಗುತ್ತದೆ. ನಿವೃತ್ತಿಯ ನಂತರ ಈ ಮೊತ್ತವನ್ನು ಸಾಮಾನ್ಯವಾಗಿ ತೆಗೆದುಕೊಳ್ಳಬೇಕು.
ಆದರೆ ಉದ್ಯೋಗಿ ಕಡೆಯಿಂದ ಸ್ವಲ್ಪ ಮೊತ್ತವನ್ನು ಕೆಲವು ವಿಶೇಷ ಸಂದರ್ಭಗಳಲ್ಲಿ ಈ ಒಂದು ಭವಿಷ್ಯ ನಿಧಿ ಸಂಸ್ಥೆಯಿಂದ ತೆಗೆದುಕೊಳ್ಳಬಹುದು. ಶಿಕ್ಷಣ ವೈದ್ಯಕೀಯ ಚಿಕಿತ್ಸೆ ಮದುವೆ ಗೃಹ ಸಾಲ ಮನೆ ನಿರ್ಮಾಣ ವೆಚ್ಚಗಳಂತಹ ನಿರ್ದಿಷ್ಟ ಹಣಕಾಸಿನ ಅಗತ್ಯಗಳಿಗಾಗಿ ಮೊದಲೇ ಹಣವನ್ನು ಈ ಒಂದು ಭವಿಷ್ಯ ನಿಧಿಯಿಂದ ಹಿಂಪಡೆಯಬಹುದು. ವೈದ್ಯಕೀಯ ತುರ್ತು ಪರಿಸ್ಥಿತಿ ಇದ್ದಂತಹ ಸಂದರ್ಭದಲ್ಲಿ ಹೆಚ್ಚಿನ ಗ್ರಾಹಕರು ಅದರ ಹಣವನ್ನು ಹಿಂತೆಗೆದುಕೊಳ್ಳುತ್ತಾರೆ.
ಅದೇ ರೀತಿ ಪಿ ಎಫ್ ನಿಂದ ಹಣವನ್ನು ತುತ್ತು ಚಿಕಿತ್ಸೆಯ ಸಮಯದಲ್ಲಿ ಹೇಗೆ ಹಿಂಪಡೆಯಬಹುದು ಎಂಬುದರ ಬಗ್ಗೆ ಈ ಕೆಳಗಿನಂತೆ ತಿಳಿದುಕೊಳ್ಳಬಹುದು.
PF ಹಣವನ್ನು ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಹಿಂಪಡೆಯಬಹುದು :
ವೈದ್ಯಕೀಯ ತುರ್ತು ಪರಿಸ್ಥಿತಿಗಳು ಅಥವಾ ಮಾರಣಾಂತಿಕ ಪರಿಸ್ಥಿತಿಗಳಿಂದ ಆಸ್ಪತ್ರೆಗೆ ದಾಖಲಾದಂತಹ ಸಂದರ್ಭದಲ್ಲಿ 1 ಲಕ್ಷಗಳ ಹಣವನ್ನು ಇಪಿಎಫ್ಒ ಸದಸ್ಯರು ಹಿಂಪಡೆಯಬಹುದು. ಈ ಮುಂಗಡ ಪ ಪಡೆಯಲು ಈ ಹಿಂದೆ ಆಸ್ಪತ್ರೆಯಿಂದ ಸದಸ್ಯರು ಅಂದಾಜು ಪಟ್ಟಿಯನ್ನು ಸಲ್ಲಿಕೆ ಮಾಡಬೇಕಾಗಿತ್ತು.
ಆದರೆ ಇದೀಗ ಯಾವುದೇ ದಾಖಲೆ ಅಗತ್ಯವಿಲ್ಲದೆ ವೈದ್ಯಕೀಯ ಮುಂಗಡವನ್ನು ಒಂದು ಲಕ್ಷದವರೆಗೆ ನೀಡಲಾಗುತ್ತದೆ. ಆಸ್ಪತ್ರೆಗೆ ಮಾರಣಾಂತಿಕ ಕಾಯಿಲೆಗಳ ಸಂದರ್ಭದಲ್ಲಿ ರೋಗಿಯನ್ನು ತುರ್ತು ಸಂದರ್ಭಗಳಲ್ಲಿ ಅವರ ಜೀವವನ್ನು ಉಳಿಸಲು ಸೇರಿಸುವುದು ಕಡ್ಡಾಯವಾಗಿದೆ ಮತ್ತು ಅಂತಹ ಸಂದರ್ಭದಲ್ಲಿ ಅಂದಾಜು ಪಡೆಯಲು ಆಸ್ಪತ್ರೆಯಿಂದ ಸಾಧ್ಯವಿಲ್ಲದ ಕಾರಣದಿಂದಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಇದನ್ನು ಓದಿ : ಎಣ್ಣೆ ಪ್ರಿಯರಿಗೆ ಸಿಹಿ ಸುದ್ದಿ!! ನಾಳೆಯಿಂದ ದುಬಾರಿ ಮದ್ಯ ಕಡಿಮೆ ಬೆಲೆಗೆ
ಹಣವನ್ನು ಹಿಂಪಡೆಯಲು ಕೆಲವು ಷರತ್ತುಗಳು :
ಒಂದೇ ಬಾರಿಗೆ ಲಕ್ಷ ರೂಪಾಯಿಗಳ ಹಣವನ್ನು ಹಿಂಪಡೆಯುವ ಸಂದರ್ಭದಲ್ಲಿ ರೋಗದ ಚಿಕಿತ್ಸೆಗಾಗಿ ESIC ಅಥವಾ CGHS ಎಂಪನೆಲ್ಡ್ ಆಸ್ಪತ್ರೆ ಅಂತಹ ಸಾರ್ವಜನಿಕ ವಲಯದ ಇಲಾಖೆಗೆ ಸೇರಿದವರು ಮಾತ್ರ ಈ ಹಣವನ್ನು ಹಿಂಪಡೆಯಬಹುದು.
ಖಾಸಗಿ ಆಸ್ಪತ್ರೆಯಲ್ಲಿ ಏನಾದರೂ ದಾಖಲಾಗಿದ್ದರೆ EPFO ಮೂಲಭೂತವಾಗಿ ಕೆಲವೊಂದು ಅಂಶಗಳನ್ನು ಪರಿಶೀಲನೆ ಮಾಡುತ್ತದೆ ಆನಂತರ ಹಣವನ್ನು ನೀಡಬಹುದೇ ಇಲ್ಲವೇ ಎಂಬುದರ ಬಗ್ಗೆ ನಿರ್ಧರಿಸಲಾಗುತ್ತದೆ.
EPFO ಮುಂಗಡ ಹಕ್ಕು ಪಡೆಯುವ ವಿಧಾನ :
- ಮೊದಲು EPFO ಪೋರ್ಟಲ್ ಗೆ ಭೇಟಿ ನೀಡಿ ಅದರಲ್ಲಿ ತಮ್ಮ ಯುನಿವರ್ಸಲ್ ಖಾತೆಯ ಸಂಖ್ಯೆ (UAN), ಪಾಸ್ವರ್ಡ್ ಅನ್ನು ನಮೂದಿಸಬೇಕು.
- ಲಾಗಿನ್ ಮಾಡಲು ಕ್ಯಾಪ್ಚ ಕೋಡನ್ನು ಟೈಪ್ ಮಾಡಬೇಕು.
- ಅದಾದ ನಂತರ ತೆರೆಯುವ ಪುಟದಲ್ಲಿ ಬ್ಯಾಂಕ್ ಖಾತೆಯ ಮಾಹಿತಿಗಳನ್ನು ನಮೂದಿಸಿ ಮತ್ತು ಮುಂದುವರಿಸುವ ಸಲುವಾಗಿ ಮೌಲಿಕರಿಸಿ ಎಂಬುದರ ಮೇಲೆ ಆಯ್ಕೆ ಮಾಡಬೇಕು.
- ಪಿಎಫ್ ಖಾತೆಗೆ ಈ ಮಾಹಿತಿಯನ್ನು ಲಿಂಕ್ ಮಾಡಲಾಗುತ್ತದೆ ಈಗ ಎಲ್ಲಾ ನಿಯಮಗಳನ್ನು ಶರತ್ತುಗಳನ್ನು ಒಪ್ಪಿಕೊಂಡ ನಂತರ ಎಸ್ ಎಂಬುದರ ಮೇಲೆ ಕ್ಲಿಕ್ ಮಾಡಬೇಕು.
- ಅದಾದ ನಂತರ ಆನ್ಲೈನ್ ಸೇವೆಗಳು ನಿಮಗೆ ಸಿಗಲಿವೆ. ಅದರಲ್ಲಿ ಸಿಕ್ನೆಸ್ ಕ್ಲೈಮ್ ಫಾರಂ 31ನ್ನು ಆಯ್ಕೆ ಮಾಡಬೇಕು.
- ಅದಾದ ನಂತರ ಪ್ರೋಸೀಡ್ ಫಾರ್ ಆನ್ಲೈನ್ ಕ್ಲೈಮ್ ಎಂಬುದರ ಮೇಲೆ ಕ್ಲಿಕ್ ಮಾಡಬೇಕು.
- ನಂತರ ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದರೆ ವೈದ್ಯಕೀಯ ಬಿಲ್ ಗಳನ್ನು ಉದ್ಯೋಗಿಯು ಪಿಎಫ್ ಹಣವನ್ನು ಹಿಂಪಡೆಯುವ ಸಲುವಾಗಿ 45 ದಿನಗಳ ಒಳಗಾಗಿ EPFO ಗೇ ಸಲ್ಲಿಸಬೇಕು.
- ಪ್ರಕ್ರಿಯಗೊಳಿಸಿದ ನಂತರ ಅನುಮೋದನೆಗಾಗಿ ಉದ್ಯೋಗದಾತರಿಗೆ ಹಕ್ಕು ಹೋಗುತ್ತದೆ. ಹೀಗೆ ಆನ್ಲೈನಲ್ಲಿ ತಮ್ಮ ಕ್ಲೈಮ್ ಸ್ಥಿತಿಯನ್ನು ವಿಚಾರಣೆ ಮಾಡಬಹುದು.
ಒಟ್ಟಾರೆ ಕೇಂದ್ರ ಸರ್ಕಾರವು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪಿಎಫ್ ಹಣವನ್ನು ಒಂದು ಲಕ್ಷದವರೆಗೆ ಹಿಂಪಡೆಯಲು ಅವಕಾಶ ಕಲ್ಪಿಸಿದ್ದು ಇದರಿಂದ ಉದ್ಯೋಗಿಗಳಿಗೆ ಆರ್ಥಿಕ ಸ್ಥಿತಿ ಸರಿಯಾಗಿಲ್ಲದ ಸಂದರ್ಭದಲ್ಲಿ ಅಥವಾ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಹಣವನ್ನು ಹಿಂಪಡೆಯಲು ಸಾಧ್ಯವಾಗುತ್ತದೆ. ಆನ್ಲೈನ್ ಮೂಲಕ ಯಾವ ರೀತಿ ಪಿಎಫ್ ಹಣವನ್ನು ಪಡೆಯಬಹುದು ಎಂಬುದರ ಬಗ್ಗೆ ಈ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ರೈಲ್ ವಿಕಾಸ್ ನಿಗಮ್ ಲಿಮಿಟೆಡ್ ನೇಮಕಾತಿ 2024 : 44 ಹುದ್ದೆಗಳಿಗೆ ಅರ್ಜಿ ಆಹ್ವಾನ
- ರೇಷನ್ ಕಾರ್ಡ್ ಹೊಂದಿರುವವರು ಕಡ್ಡಾಯವಾಗಿ ಆಗಸ್ಟ್ 31ನೇ ತಾರೀಖಿನ ಒಳಗಾಗಿ ಈ ಕೆಲಸ ಮಾಡಿ