ಹಲೋ ಸ್ನೇಹಿತರೇ, ಕೃಷಿ ಇಲಾಖೆ ವತಿಯಿಂದ ಪ್ರಸ್ತಕ ಸಾಲಿನಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಹನಿ ನೀರಾವರಿ ಕಾರ್ಯಕ್ರಮದಡಿ ತೋಟಗಾರಿಕೆ ಬೆಳೆ ಬೆಳೆಯುವ ಹಾಗೂ ಬೆಳೆಯಲು ಇಚ್ಚಿಸಿರುವ ರೈತ ಫಲಾನುಭವಿಗಳಿಗೆ ಸಹಾಯಧನ ನೀಡಲು ಉದ್ದೇಶಿಸಲಾಗಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಸಾಮಾನ್ಯ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ಶೇ.90 ರಂತೆ ಗರಿಷ್ಠ 2 ಹೆಕ್ಟೇರ್‌ವರೆಗೆ ಹನಿ ನೀರಾವರಿ ಅಳವಡಿಕೆಗೆ ಸಹಾಯಧನ ನೀಡಲಾಗುತ್ತದೆ. ಅಲ್ಪಸಂಖ್ಯಾತ ವರ್ಗದವರಿಗೆ ಶೇ.15, ವಿಕಲಾಂಗಚೇತನರಿಗೆ ಶೇ.5 ಮತ್ತು ರೈತ ಮಹಿಳೆಯರಿಗೆ ಶೇ.33 ರಷ್ಟು ಅನುದಾನ ಮೀಸಲಿರಿಸಲಾಗಿದೆ.
ಆಸಕ್ತ ರೈತರು ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನ ತೋಟಗಾರಿಕೆ ಇಲಾಖೆ ಕಚೇರಿಗೆ ಸಂಪರ್ಕಿಸಿ, ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದು ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಸಂತೋಷ್ ಸಪ್ಪಂಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಸಹ ಓದಿ : ಆಧಾರ್ ಕಾರ್ಡ್ ಹೊಂದಿರುವವರಿಗೆ ಕೊನೆಯ ಅವಕಾಶ..!
ಎಷ್ಟು ಪ್ರಮಾಣ ಸಿಗಲಿದೆ?
ಸೂಕ್ಷ್ಮ ನೀರಾವರಿ ಎಂದರೆ ನೀರನ್ನು ಬೇರುಗಳ ಬಳಿ ನೇರವಾಗಿ ಹನಿ ಹನಿಯಾಗಿ ಅಥವಾ ಸಿಂಪಡಿಸುವ ಮೂಲಕ ನೀರುಣಿಸುವ ವಿಧಾನ. ಇದರಿಂದ ನೀರು ವ್ಯರ್ಥವಾಗುವುದನ್ನು ತಡೆಯುತ್ತದೆ ಮತ್ತು ಬೆಳೆಗಳಿಗೆ ಸಮರ್ಪಕವಾದ ನೀರು ಸಿಗುತ್ತದೆ. ಈ ಯೋಜನೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ರೈತರು ಸೂಕ್ಷ್ಮ ನೀರಾವರಿ ಅಳವಡಿಸಿಕೊಂಡರೆ ಹೆಚ್ಚಿನ ಪ್ರಮಾಣದಲ್ಲಿ ಸಹಾಯಧನ ಪಡೆಯಬಹುದು. ಇವರಿಗೆ 90% ಸಹಾಯಧನ ಸಿಗಲಿದೆ. ಹಾಗೂ ಇತರ ವರ್ಗದವರಿಗೆ 55% ಸಹಾಯಧನ ಸಿಗಲಿದೆ.
ಈ ಯೋಜನೆಯ ಪ್ರಯೋಜನಗಳು:
- ಉತ್ಪಾದನೆಯ ಪ್ರಮಾಣ ಹೆಚ್ಚಳ: ಸಮರ್ಪಕವಾದ ನೀರಾವರಿಯಿಂದ ಬೆಳೆಗಳ ಉತ್ಪಾದನೆ ಹೆಚ್ಚಳ ಆಗಿತ್ತದೆ. ಇದರಿಂದ ರೈತರ ಆದಾಯ ಹೆಚ್ಚುತ್ತದೆ.
- ಬೆಳೆ ವಿವಿಧತೆ: ವಿವಿಧ ಬೆಳೆಗಳನ್ನು ಬೆಳೆಯಲು ಅವಕಾಶ ಸಿಗುತ್ತದೆ. ಇದರಿಂದ ರೈತರು ಒಂದೇ ಬೆಳೆಗೆ ಅವಲಂಬಿತರಾಗುವುದನ್ನು ತಪ್ಪಿಸಬಹುದು.
- ಆದಾಯ ಸ್ಥಿರತೆ: ನೀರಾವರಿಯಿಂದಾಗಿ ಬೆಳೆಗಳು ಹವಾಮಾನದ ಅನಿಶ್ಚಿತತೆಯಿಂದ ಕಡಿಮೆ ಪ್ರಭಾವಿತವಾಗಿರುತ್ತದೆ. ಇದರಿಂದ ರೈತರ ಆದಾಯ ಸ್ಥಿರವಾಗಿದೆ.
- ನೀರಿನ ಸಮರ್ಥ ಬಳಕೆ: ಸೂಕ್ಷ್ಮ ನೀರಾವರಿ ತಂತ್ರಜ್ಞಾನಗಳನ್ನು ಬಳಸುವುದರಿಂದ ನೀರು ವ್ಯರ್ಥವಾಗುವುದನ್ನು ತಡೆಯುತ್ತದೆ.
- ಮಣ್ಣಿನ ಫಲವತ್ತತೆ: ಸಮರ್ಪಕವಾದ ನೀರಾವರಿಯಿಂದ ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ.
- ಗ್ರಾಮೀಣ ಆರ್ಥಿಕತೆಯ ಬೆಳವಣಿಗೆ: ಕೃಷಿ ಉತ್ಪಾದನೆ ಹೆಚ್ಚಾದಂತೆ ಗ್ರಾಮೀಣ ಆರ್ಥಿಕತೆ ಬೆಳೆಯುತ್ತದೆ.
- ಜೀವನ ಮಟ್ಟ ಸುಧಾರಣೆ: ಹೆಚ್ಚಿನ ಆದಾಯದಿಂದಾಗಿ ರೈತರ ಜೀವನ ಮಟ್ಟ ಸುಧಾರಿಸುತ್ತದೆ.
ಇತರೆ ವಿಷಯಗಳು:
ಮುಂದಿನ 5 ದಿನ ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆ : ರೆಡ್ ಅಲರ್ಟ್ ಜಾರಿ
ದೇಶದ ಜನತೆಗೆ ಬೆಳ್ಳಂಬೆಳಗ್ಗೆಯೇ ಶಾಕಿಂಗ್ ಸುದ್ದಿ: ದಿಢೀರ್ LPG ಬೆಲೆ ಏರಿಕೆ!
ವಿದ್ಯಾರ್ಥಿಗಳಿಗೆ ಸಿಗಲಿದೆ 30,000 ಸಹಾಯಧನ ಅರ್ಜಿ ಸಲ್ಲಿಸಿ ಪಡೆದುಕೊಳ್ಳಿ ಇಲ್ಲಿದೆ ಲಿಂಕ್