ನಮಸ್ಕಾರ ಸ್ನೇಹಿತರೆ ಸಾಮಾನ್ಯವಾಗಿ ಪ್ರತಿಯೊಬ್ಬರು ಕೂಡ ಉಳಿತಾಯ ಖಾತೆಯನ್ನು ಬ್ಯಾಂಕ್ ನಲ್ಲಿ ತೆರೆಯುತ್ತಾರೆ ಉಳಿತಾಯ ಖಾತೆಯನ್ನು ತೆರೆಯುವ ಸಂದರ್ಭದಲ್ಲಿ ಕನಿಷ್ಠ ಠೇವಣಿಯ ಅವಶ್ಯಕತೆಗಳನ್ನು ವಿವಿಧ ಬ್ಯಾಂಕುಗಳು ನಿಗದಿಪಡಿಸಿರುತ್ತವೆ. ಅದರಂತೆ ಅಭ್ಯರ್ಥಿಗಳು ಕನಿಷ್ಠ ಠೇವಣಿ ಅವಶ್ಯಕತೆಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿರುತ್ತದೆ.
ಒಂದು ವೇಳೆ ತಮ್ಮ ಬ್ಯಾಂಕ್ ಖಾತೆಯಲ್ಲಿ ಬ್ಯಾಲೆನ್ಸ್ ಕನಿಷ್ಠಕ್ಕಿಂತ ಕಡಿಮೆಯಾಗಿದ್ದರೆ ಬ್ಯಾಂಕುಗಳು ಅದರ ಮೇಲೆ ದಂಡವನ್ನು ವಿಧಿಸಬಹುದು. ಕನಿಷ್ಠ ಬ್ಯಾಲೆನ್ಸ್ ವಿವಿಧ ಬ್ಯಾಂಕುಗಳದ್ದು ಮಾನದಂಡ ಎಷ್ಟಿದೆ ಎಂಬುದರ ವಿವರವಾದ ನೋಟ ಈ ಕೆಳಗಿನಂತಿದೆ.
ಕನಿಷ್ಠ ಬ್ಯಾಲೆನ್ಸ್ ಎಂದರೆ :
ತಮ್ಮ ಉಳಿತಾಯ ಖಾತೆಯಲ್ಲಿ ದಂಡವನ್ನು ತಪ್ಪಿಸಲು ನೀವು ಇರಿಸಬೇಕಾದಂತಹ ಕನಿಷ್ಠ ಮೊತ್ತವನ್ನು ಕನಿಷ್ಠ ಬ್ಯಾಲೆನ್ಸ್ ಎಂದು ಕರೆಯಲಾಗುತ್ತದೆ. ಈ ಒಂದು ಅವಶ್ಯಕತೆಯೂ ಬ್ಯಾಂಕುಗಳ ನಡುವೆ ಬದಲಾಗುತ್ತದೆ ಮತ್ತು ಖಾತೆಯ ಪ್ರಕಾರ ಮತ್ತು ಒದಗಿಸಿದ ಸೇವೆಗಳಿಂದ ಇದು ಪ್ರಭಾವಿತವಾಗಿರುತ್ತದೆ. ವಿವಿಧ ಬ್ಯಾಂಕುಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಎಷ್ಟಿದೆ ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ನೋಡುವುದಾದರೆ.
ಇದನ್ನು ಓದಿ : ಹೊಸ ಮಹಿಂದ್ರ ಥಾರ್ ರೋಕ್ಸ್ ಖರೀದಿ ಮಾಡಲು ಮುಗಿಬಿದ್ದ ಜನ : ಇದರ ಮೈಲೇಜ್ ಎಷ್ಟು ಗೊತ್ತಾ?
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ :
- ಕನಿಷ್ಠ ಬ್ಯಾಲೆನ್ಸ್ : 0
- ವಿವರಗಳು : ಎಸ್ ಬಿ ಐ 2022ರಲ್ಲಿ ಕನಿಷ್ಠ ಬ್ಯಾಲೆನ್ಸ್ ಅಗತ್ಯವನ್ನು ತೆಗೆದು ಹಾಕಿರುವ ಕಾರಣದಿಂದ ಕನಿಷ್ಠ ಬ್ಯಾಲೆನ್ಸ್ ಅನ್ನು ಗ್ರಾಹಕರು ನಿರ್ವಹಿಸುವ ಅಗತ್ಯವಿಲ್ಲ.
ಹೆಚ್ಡಿಎಫ್ಸಿ ಬ್ಯಾಂಕ್ :
ಮೆಟ್ರೋ ಮತ್ತು ನಗರ ಪ್ರದೇಶಗಳಲ್ಲಿ
- ಕನಿಷ್ಠ ಬ್ಯಾಲೆನ್ಸ್ : 10000
- ಪರ್ಯಾಯ : ಒಂದು ವರ್ಷ + ಒಂದು ದಿನದ ಅವಧಿಗೆ ಒಂದು ಲಕ್ಷ ಸ್ಥಿರ ಠೇವಣಿ
ಅರೆ ನಗರ ಪ್ರದೇಶಗಳಲ್ಲಿ :
- ಕನಿಷ್ಠ ಬ್ಯಾಲೆನ್ಸ್ : 5000
- ಪರ್ಯಾಯ : 50000 ಸ್ಥಿರ ಠೇವಣಿ
- ದಂಡ : ಗರಿಷ್ಠ 6% ಅಥವಾ 600 ರೂಪಾಯಿ ತಂಡ
ಐಸಿಐಸಿಐ ಬ್ಯಾಂಕ್ :
- ಕನಿಷ್ಠ ಬ್ಯಾಲೆನ್ಸ್ ಮಾಸಿಕ : 5000
- ದಂಡ : ಎಂ ಎ ಬಿ ನಿಂದ 5% ಕೊರತೆ +100 ರೂಪಾಯಿ
ಪಂಜಾಬ್ ನ್ಯಾಷನಲ್ ಬ್ಯಾಂಕ್ :
ಗ್ರಾಮೀಣ ಪ್ರದೇಶ
- ಕನಿಷ್ಠ ಬಾಕಿ : 400 ರೂಪಾಯಿ
ಅರೆ ನಗರ ಪ್ರದೇಶಗಳು - ಕನಿಷ್ಠ ಬ್ಯಾಲೆನ್ಸ್ : 500 ರೂಪಾಯಿ
ನಗರಾಧವ ಮೆಟ್ರೋ ಪ್ರದೇಶಗಳು - ಕನಿಷ್ಠ ಬ್ಯಾಲೆನ್ಸ್ : 600 ರೂಪಾಯಿ
- ದಂಡ : ಪ್ರದೇಶವಾರು ಬದಲಾವಣೆ
S ಬ್ಯಾಂಕ್ :
- ಕನಿಷ್ಠ ಬ್ಯಾಲೆನ್ಸ್ : 0
- ವಿವರಗಳು : ಈ ಬ್ಯಾಂಕಿನ ಗ್ರಾಹಕರು ಕನಿಷ್ಠ ಬ್ಯಾಲೆನ್ಸ್ ಅನ್ನು ಕಾಯ್ದುಕೊಳ್ಳುವ ಅಗತ್ಯವಿರುವುದಿಲ್ಲ
ಕನಿಷ್ಠ ಬ್ಯಾಲೆನ್ಸ್ ಮುಖ್ಯ ಏತಕ್ಕಾಗಿ :
ಬ್ಯಾಂಕುಗಳ ಕನಿಷ್ಠ ಬ್ಯಾಲೆನ್ಸ್ ಅನ್ನು ಖಾತೆಗಳನ್ನು ಸಮತವಾಗಿ ನಿರ್ವಹಿಸಲು ಮತ್ತು ವಿವಿಧ ಉಚಿತ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಸಹಾಯ ಮಾಡುತ್ತವೆ. ಆದರೂ ಅಗತ್ಯವಿರುವ ಸಮತೋಲನ ಕಾಪಾಡಿಕೊಳ್ಳಲು ಗ್ರಾಹಕರು ಫಲರಾದರೆ ದಂಡಗಳಿಗೆ ಕಾರಣವಾಗುತ್ತದೆ. ಸಾರ್ವಜನಿಕ ವಲಯದ ಬ್ಯಾಂಕುಗಳು ಕಳೆದ ಐದು ವರ್ಷಗಳಲ್ಲಿ 8495 ಕೋಟಿ ತಂಡವನ್ನು ವಿಧಿಸಿವೆ.
ಒಟ್ಟಾರೆ ಉಳಿತಾಯ ಖಾತೆಯನ್ನು ಹೊಂದಿರುವಂತಹ ಗ್ರಾಹಕರು ತಮ್ಮ ಬ್ಯಾಂಕುಗಳಿಗೆ ಅನುಗುಣವಾಗಿ ಕನಿಷ್ಠ ಬ್ಯಾಲೆನ್ಸ್ ಅನ್ನು ಹೊಂದಿರಬೇಕೇ ಇಲ್ಲವೇ ಎಂಬುದನ್ನು ತಿಳಿದುಕೊಂಡಿರುವುದು ಮುಖ್ಯವಾಗಿರುತ್ತದೆ. ಒಂದು ವೇಳೆ ಕನಿಷ್ಠ ಬ್ಯಾಲೆನ್ಸ್ ಅನ್ನು ಹೊಂದಿರದಿದ್ದರೆ ಬ್ಯಾಂಕುಗಳು ದಂಡವನ್ನು ಗ್ರಾಹಕರಿಗೆ ವಿಧಿಸುತ್ತದೆ.
ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರು ಕೂಡ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿದ್ದರೆ ಅವರ ಕನಿಷ್ಠ ಬ್ಯಾಲೆನ್ಸ್ ಎಷ್ಟಿರಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು ;
- ರಾಜ್ಯ ಸರ್ಕಾರದಿಂದ ಉಚಿತ ಹೊಲಿಗೆ ಯಂತ್ರ ಯೋಜನೆ ಪ್ರಾರಂಭ : ಹೊಲಿಗೆ ಯಂತ್ರಕ್ಕಾಗಿ ಕೂಡಲೇ ಅರ್ಜಿ ಸಲ್ಲಿಸಿ
- ಕರ್ನಾಟಕದಲ್ಲಿ ಚಿನ್ನಭರಣಪ್ರಿಯರಿಗೆ ಸ್ವಲ್ಪ ನಿರಾಳ : ಚಿನ್ನದ ಬೆಲೆಯಲ್ಲಿ ಇಳಿಕೆ