ಅನ್ನಭಾಗ್ಯ ಹಣ ಬಿಡುಗಡೆ ಕುರಿತು ಮಹತ್ವದ ಬದಲಾವಣೆ! ಇಲ್ಲಿದೆ ಹೊಸ ಅಪ್ಡೇಟ್

ಹಲೋ ಸ್ನೇಹಿತರೇ, ರಾಜ್ಯದಲ್ಲಿ ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯಡಿ ಈ ಹಿಂದೆ ಅಕ್ಕಿ ಬದಲು ಹಣವನ್ನು ನೀಡಲಾಗುತಿತ್ತು ಈ ಕುರಿತು ರಾಜ್ಯ ಸರಕಾರದಿಂದ ಮಹತ್ವದ ಬದಲಾವಣೆ ಮಾಡಲಾಗಿದೆ. ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ರಾಜ್ಯದಲ್ಲಿ ಪಡಿತರ ಚೀಟಿ ಹೊಂದಿರುವ ಗ್ರಾಹಕರಿಗೆ ಪ್ರತಿ ತಿಂಗಳು ಆಹಾರ ಧಾನ್ಯಗಳನ್ನು ನೀಡಲಾಗುತ್ತದೆ ಇದೆ ರೀತಿ ಈ ಹಿಂದೆ ದೊಡ್ಡ ಪ್ರಮಾಣದಲ್ಲಿ ಅಕ್ಕಿ ಲಭ್ಯವಿಲ್ಲದ ಕಾರಣ 5 ಕೆಜಿ ಅಕ್ಕಿ ಬದಲು ಹಣವನ್ನು ನೀಡಲಾಗುತಿತ್ತು.

Anna bhagya yojana

ಇನ್ನು ಮುಂದೆ 5 ಕೆಜಿ ಅಕ್ಕಿ ಬದಲು ಹಣವನ್ನು ನೀಡುವುದಿಲ್ಲ ಕಾರಣವೇನು? ಅಕ್ಕಿ ಬದಲು ಹಣ ನೀಡುವುದನ್ನು ನಿಲ್ಲಿಸುವುದರ ಹಿಂದಿನ ಕಾರಣದ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಪ್ರಸ್ತುತ ರೇಷನ್ ಕಾರ್ಡ್ ಕುರಿತು ಅಂಕಿ-ಸಂಖ್ಯೆ ವಿವರಗಳು:

ಪ್ರಸ್ತುತ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ರೇಷನ್ ಕಾರ್ಡಗಳ ಅಂಕಿ-ಸಂಖ್ಯೆಯ ವಿವರ ಈ ಕೆಳಗಿನಂತಿದೆ:

1) ಒಟ್ಟು BPL ಕಾರ್ಡದಾರರು: 13 ಲಕ್ಷ
2) Total Members- 5,17,81,138
3) AAY Card- 43,40,813
4) PHH Card- 3,90,78,483
5) NPHH Card- 83,61,842
6) 29 ವಯಸ್ಸಿನ ಒಳಗಿರುವವರ ಸಂಖ್ಯೆ- 1,97,55,733
7) 30-75 ವಯಸ್ಸಿನ ಸದಸ್ಯರ ಸಂಖ್ಯೆ- 2,91,89,829
8) 75 ವರ್ಷ ಮೇಲ್ಪಟ್ಟ ವಯಸ್ಸಿನ ಸದಸ್ಯರ ಸಂಖ್ಯೆ- 16,64958

ಅನ್ನಭಾಗ್ಯ ಯೋಜನೆಯಡಿ ಎಷ್ಟು? ಹಣ ನೀಡಲಾಗುತಿತ್ತು?

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಯ ಒಂದು ಭಾಗವಾಗಿ 10 ಕೆಜಿ ಅಕ್ಕಿ ವಿತರಣೆ ಮಾಡಲಾಗುವುದು ಎಂದು ಸರ್ಕಾರದಿಂದ ಘೋಷಣೆ ಮಾಡಿರುವುದರ ಪ್ರಕಾರವಾಗಿ 5 ಕೆಜಿ ಅಕ್ಕಿ ನೀಡಿ ಉಳಿದ 5 ಕೆಜಿ ಅಕ್ಕಿ ಬದಲು ಪ್ರತಿ ಕೆಜಿ ಅಕ್ಕಿಗೆ 34 ರೂ ರಂತೆ ಒಟ್ಟು 170 ರೂ ಹಣವನ್ನು ನೇರ ನಗದು ವರ್ಗಾವಣೆ(DBT) ಮೂಲಕ ಅರ್ಹ ಪಡಿತರ ಚೀಟಿ ಗ್ರಾಹಕರ ಖಾತೆಗೆ ಜಮಾ ಮಾಡಲಾಗುತಿತ್ತು.

ಇದನ್ನೂ ಸಹ ಓದಿ : ಆಭರಣ ಪ್ರಿಯರಿಗೆ ಸಿಹಿ ಸುದ್ದಿ: ದಿಢೀರನೆ ಚಿನ್ನದ ಬೆಲೆ ₹3500 ಇಳಿಕೆ!

ಅಕ್ಕಿ ವಿತರಣೆಗೆ ಬೇಕು 20 ಸಾವಿರ ಮೆಟ್ರಿಕ್ ಟನ್!

ಈ ಯೋಜನೆಯಡಿ ಸರಕಾರದಿಂದ ಪಡಿತರ ಚೀಟಿದಾರರಿಗೆ ಅಕ್ಕಿ ವಿತರಣೆ ಮಾಡಲು ಪ್ರತಿ ತಿಂಗಳಿಗೆ ಒಟ್ಟು 20 ಸಾವಿರ ಮೆಟ್ರಿಕ್ ಟನ್ ಅಕ್ಕಿ ಬೇಕಾಗುತ್ತದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದಾರೆ.

ಅಕ್ಕಿ ಕೊಡಲು ಒಪ್ಪಿಗೆ ನೀಡಿದ ಬೆನ್ನಲ್ಲೇ ಹಣ ವರ್ಗಾವಣೆ ನಿಲ್ಲಿಸಲಾಗಿದೆ:

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಕುಟುಂಬದ ಸದಸ್ಯರಿಗೆ ತಲಾ 10 ಕೆಜಿ ಅಕ್ಕಿ ನೀಡಲಾಗುವುದು ಎಂದು ಘೋಷಣೆ ನೀಡಲಾಗಿತ್ತು ಇದರಂತೆ ಅಧಿಕಾರಕ್ಕೆ ಬಂದ ನಂತರ ಈ ಯೋಜನೆಯನ್ನು ಚಾಲ್ತಿಗೆ ತರಲಾಗಿತ್ತಾದರು ಅಕ್ಕಿ ದಾಸ್ತಾನು ಕೊರತೆ ಇದ್ದಿದರಿಂದ 10 ಕೆಜಿ ಅಕ್ಕಿ ವಿತರಣೆ ಮಾಡಲು ಸಾಧ್ಯವಾಗಿರುವುದಿಲ್ಲ.

5 ಕೆಜಿ ಅಕ್ಕಿ ನೀಡಿ ಇನ್ನು 5 ಕೆಜಿ ಅಕ್ಕಿ ಬದಲು ಹಣವನ್ನು ಜಮಾ ಮಾಡುತಿತ್ತು ಅದರೆ ಈಗ ಪುಡ್ ಕಾರ್ಪೋರೇಷನ್ ಆಫ್ ಇಂಡಿಯಾ(FCI) ದಿಂದ  28 ರೂ ಗೆ ಅಕ್ಕಿ ಕೊಡಲು ಒಪ್ಪಿಗೆ ನೀಡಿರುವುದರಿಂದ ಇನ್ನು ಮುಂದೆ ರೇಷನ್ ಕಾರ್ಡದಾರರಿಗೆ 10 ಕೆಜಿ ಅಕ್ಕಿ ವಿತರಣೆ ಮಾಡಲಾಗುತ್ತದೆ. ಈ ಕಾರಣದಿಂದ ಹಣ ವರ್ಗಾವಣೆ ಸ್ಥಗಿತ ಮಾಡಲಾಗಿದೆ.

ಇತರೆ ವಿಷಯಗಳು:

ಕೇವಲ 45 ರೂಪಾಯಿಯನ್ನು LICಯಲ್ಲಿ ಹೂಡಿಕೆ ಮಾಡಿ 25 ಲಕ್ಷ ಗಳಿಸಬಹುದು

ಸಾರಿಗೆ ಇಲಾಖೆಯಿಂದ ಭರ್ಜರಿ ಸುಲಿಗೆ.!! ಟಿಕೆಟ್‌ ದರ 2 ಪಟ್ಟು ಹೆಚ್ಚಳ

ರಾಜ್ಯದ ಅನ್ನದಾತರಿಗೆ ಗುಡ್ ನ್ಯೂಸ್.!! `ಗಂಗಾ ಕಲ್ಯಾಣ’ ಯೋಜನೆಗೆ ಅರ್ಜಿ ಆರಂಭ: ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *