ರಾಜ್ಯದ ಅನ್ನದಾತರಿಗೆ ಗುಡ್ ನ್ಯೂಸ್.!! `ಗಂಗಾ ಕಲ್ಯಾಣ’ ಯೋಜನೆಗೆ ಅರ್ಜಿ ಆರಂಭ: ಇಲ್ಲಿ ಕ್ಲಿಕ್‌ ಮಾಡಿ

ಹಲೋ ಸ್ನೇಹಿತರೇ, ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಸಿಹಿಸುದ್ದಿ ನೀಡಿದ್ದು, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಗಂಗಾಕಲ್ಯಾಣ ನೀರಾವರಿ ಯೋಜನೆಯಲ್ಲಿ ಸೌಲಭ್ಯ ಪಡೆಯಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಸೆ.15 ರವರೆಗೆ ಅವಧಿ ವಿಸ್ತರಣೆ ಮಾಡಲಾಗಿದೆ.

ganga kalyana scheme karnataka

ಡಿ.ದೇವರಾಜ ಅರಸುರವರ ಹಿಂದುಳಿದ ವರ್ಗಗಳ ಅಭಿವೃದ್ಧಿಯ ನಿಗಮ ಹಾಗೂ ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮಗಳ ವ್ಯಾಪ್ತಿಗೆ ಒಳಪಡುವ ಹಿಂದುಳಿದ ವರ್ಗಗಳ ಸಣ್ಣ ಮತ್ತು ಅತಿ ಸಣ್ಣದಾದ ರೈತರಿಗೆ ಗಂಗಾ ಕಲ್ಯಾಣ ನೀರಾವರಿ ಯೋಜನೆಯಲ್ಲಿ ಸೌಲಭ್ಯವನ್ನು ಒದಗಿಸಲಾಗುತ್ತಿದ್ದು, ಅರ್ಹತೆಯನ್ನು ರೈತ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದು.

ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆ

  • ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು.
  • ಹಾಲಿ ಜಮೀನುಗಳು ಕೃಷಿ ಚಟುವಟಿಕೆಯಲ್ಲಿರಬೇಕು.
  • ಯಾವುದೇ ಮೂಲದಿಂದ ನೀರಾವರಿ ಸೌಲಭ್ಯ ಹೊಂದಿರಬಾರದು.
  • ಫಲಾನುಭವಿಯು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
  • ವಯಸ್ಸು 18 ರಿಂದ 60 ವರ್ಷದೊಳಗಿರಬೇಕು.
  • ಕುಟುಂಬ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ. 98 ಸಾವಿರ ಹಾಗೂ ಪಟ್ಟಣ ಪ್ರದೇಶದವರಿಗೆ ರೂ. 1.20 ಲಕ್ಷಗಳು ಒಳಗಿರಬೇಕು.
  • ಒಂದೇ ಸ್ಥಳದಲ್ಲಿ ಹೊಂದಿಕೊಂಡಂತೆ ಕನಿಷ್ಠ 02 ಎಕರೆಗೆ ಜಮೀನನ್ನು ನೀವು ನಿಮ್ಮ ಬಳಿ ಇರಲೇ ಬೇಕು.

ಗಂಗಾ ಕಲ್ಯಾಣ ಯೋಜನೆಯ ಅಡಿಯಲ್ಲಿ 4 ಲಕ್ಷ ಸಬ್ಸಿಡಿಯನ್ನು ನೀಡುವ ಮೂಲಕವಾಗಿ ರಾಜ್ಯದ ರೈತರಿಗೆ ಬೋರ್ವೆಲ್ ಅನ್ನು ಕೊರಸಿಕೊಳ್ಳುವ ಅವಕಾಶವನ್ನು ನೀಡಿದೆ.

ಇದನ್ನೂ ಸಹ ಓದಿ : Bigg Boss Kannada 11: ‌ಬಿಗ್‌ಬಾಸ್‌ ಪ್ರೋಮೋ ನೋಡಿ ಶಾಕ್‌ ಆದ ಕಿಚ್ಚ ಸುದೀಪ್..!

ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ

  • ರೈತರು ಆಧಾರ್ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕು.
  • ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಸ್ವಂತ ಜಮೀನಿನ ಪಹಣಿ
  • ಅರ್ಜಿದಾರರ ಭಾವಚಿತ್ರ
  • ಬಿಪಿಎಲ್ ರೇಷನ್ ಕಾರ್ಡ್
  • ಮೊಬೈಲ್ ಸಂಖ್ಯೆ

ಅರ್ಜಿದಾರರು ಸೇವಾಸಿಂಧು ಪೋರ್ಟಲ್ ನ ಮೂಲಕವಾಗಿ ಮುಖಾಂತರ ಗ್ರಾಮ ಒನ್ ಹಾಗೂ ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಆನ್ಲೈನ್ ನ ಮೂಲಕವಾಗಿ ಅರ್ಜಿಯನ್ನು ಸೆ.15 ರೊಳಗಾಗಿ ಸಲ್ಲಿಸಬಹುದು. ಈ ಮೂಲಕವಾಗಿ ನೀವು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

ಇತರೆ ವಿಷಯಗಳು:

ದೇಶದ ಜನತೆಗೆ ಬೆಳ್ಳಂಬೆಳಗ್ಗೆಯೇ ಶಾಕಿಂಗ್‌ ಸುದ್ದಿ: ದಿಢೀರ್‌ LPG ಬೆಲೆ ಏರಿಕೆ!

ಆದಾಯ ತೆರಿಗೆಯಲ್ಲಿ ದೊಡ್ಡ ಬದಲಾವಣೆ! ಇಂದಿನಿಂದ ಹೊಸ ನಿಯಮ ಜಾರಿ

ಗೃಹಲಕ್ಷ್ಮಿ ಯೋಜನೆಗೆ 1 ವರ್ಷದ ಸಂಭ್ರಮ :ಎಲ್ಲಾ ಮಹಿಳೆಯರಿಗೆ 12ನೇ ಕಂತಿನ ಬಗ್ಗೆ ಬಿಗ್ ಅಪ್ಡೇಟ್

Leave a Reply

Your email address will not be published. Required fields are marked *