ಹಲೋ ಸ್ನೇಹಿತರೇ, ಭಾರತೀಯ ಅಂಚೆ ಇಲಾಖೆ ಗ್ರಾಹಕರ ಅನುಕೂಲಕ್ಕಾಗಿ ಹಲವು ಉಳಿತಾಯ ಯೋಜನೆಗಳನ್ನು ಪರಿಚಯಿಸಿದೆ. ಅದ್ರಲ್ಲೂ ಈ ಯೋಜನೆಯಡಿಯಲ್ಲಿ ಕನಿಷ್ಠ ಮೊತ್ತವನ್ನು ಪಾವತಿ ಮಾಡಿದ್ರೆ, ಗರಿಷ್ಠ ಮೊತ್ತವನ್ನು ವಾಪಾಸ್ ಪಡೆಯುವ ಅವಕಾಶವನ್ನು ಕಲ್ಪಿಸಿದೆ. ಒಂದೊಮ್ಮೆ ನೀವು ತಿಂಗಳಿಗೆ 1,500 ರೂಪಾಯಿ ಹೂಡಿಕೆ ಮಾಡಿದ್ರೆ, 34 ಲಕ್ಷ ರೂಪಾಯಿಯ ವರೆಗೂ ರಿಟರ್ಸ್ ಪಡೆಯಬಹುದಾಗಿದೆ. ನೀವು ಕೂಡ ಈ ಯೋಜನೆಯ ಬಗ್ಗೆ ತಿಳಿದುಕೊಳ್ಳಲು ತಪ್ಪದೇ ಈ ಲೇಖನವನ್ನು ಓದಿ ಮತ್ತು ನಿಮ್ಮ ಸ್ನೇಹಿತರಿಗೂ ಇದನ್ನು ಶೇರ್ ಮಾಡಿ.
ಗ್ರಾಮ ಸುರಕ್ಷಾ ಯೋಜನೆಯನ್ನು ಭಾರತೀಯ ಅಂಚೆ ಇಲಾಖೆ ಪರಿಚಯಿಸಿದೆ. ಈ ಯೋಜನೆಯ ಅಡಿಯಲ್ಲಿ ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಹಾಗೂ ವಾರ್ಷಿಕವಾಗಿ ಕಂತುಗಳನ್ನು ಪಾವತಿ ಮಾಡಬಹುದಾಗಿದೆ. ವರ್ಷಕ್ಕೆ ಗರಿಷ್ಠವಾಗಿ 10 ಸಾವಿರ ರೂ.ಗಳಿಂದ ಹಿಡಿದು 10 ಲಕ್ಷ ರೂಪಾಯಿಯ ವರೆಗೂ ಹೂಡಿಕೆಯನ್ನು ನೀವು ಮಾಡಬಹುದಾಗಿದೆ. ವಯಸ್ಸಿನ ಆಧಾರದ ಮೇಲೆ ಮಾಸಿಕ ಕಂತುಗಳ ಮೊತ್ತದಲ್ಲಿ ವ್ಯತ್ಯಾಸವಾಗಲಿದೆ.
ನಿಮ್ಮ ವಯಸ್ಸು 19 ವರ್ಷ ಎಂದು ತಿಳಿದುಕೊಳ್ಳಿ. ನೀವು ಪ್ರತೀ ತಿಂಗಳು 10 ಲಕ್ಷ ರೂಪಾಯಿ ಹಣವನನ್ನು ಹೂಡಿಕೆ ಮಾಡಲು ಬಯಸಿದ್ರೆ 55 ವರ್ಷಗಳ ಅವಧಿಗೆ ಮಾಸಿಕ 1,515 ರೂಪಾಯಿ ಪ್ರೀಮಿಯಂ ಪಾವತಿ ಮಾಡಬೇಕಾಗುತ್ತದೆ. ಇನ್ನು 58 ವರ್ಷಗಳ ಅವಧಿಗೆ ಮಾಡಿದ್ರೆ 1,463 ರೂಪಾಯಿ ಪ್ರೀಮಿಯಂ ಹಾಗೂ 60 ವರ್ಷಗಳಿಗೆ ಹೂಡಿಕೆ ಮಾಡಿದ್ರೆ, 1,411 ರೂಪಾಯಿ ಪ್ರೀಮಿಯಂ ಪಾವತಿಸಬೇಕಾಗಿದೆ.
ಇದನ್ನೂ ಸಹ ಓದಿ: ದೇಶದ ಜನತೆಗೆ ಬೆಳ್ಳಂಬೆಳಗ್ಗೆಯೇ ಶಾಕಿಂಗ್ ಸುದ್ದಿ: ದಿಢೀರ್ LPG ಬೆಲೆ ಏರಿಕೆ!
55 ವರ್ಷಗಳ ಅವಧಿಗೆ ಪಾಲಿಸಿಯನ್ನು ಪಡೆದುಕೊಂಡ್ರೆ ನಿಮಗೆ 31.60 ಲಕ್ಷ ರೂಪಾಯಿ, 58 ವರ್ಷದ ಅವಧಿಗೆ 33.40 ಲಕ್ಷ ರೂಪಾಯಿ ಹಾಗೂ 60 ವರ್ಷ ಅವಧಿಗೆ ಪಾಲಿಸಿಯನ್ನು ಪಡೆದುಕೊಂಡಿದ್ರೆ ನಿಮಗೆ 34.60 ಲಕ್ಷ ರೂಪಾಯಿಯನ್ನು ಪಡೆಯಬಹುದಾಗಿದೆ. ಗ್ರಾಮೀಣ ಜನರಿಗಾಗಿ ಅಂಚೆ ಇಲಾಖೆಯು ಜಾರಿಗೆ ತಂದಿರುವ ಈ ಯೋಜನೆಯಲ್ಲಿ ಸುಲಭವಾಗಿ ನೀವು ಸಹ ಹೂಡಿಕೆಯನ್ನು ಮಾಡಬಹುದಾಗಿದೆ.
ಭಾರತೀಯ ಅಂಚೆ ಇಲಾಖೆಯಲ್ಲಿ ಕೇವಲವು ಗ್ರಾಮ ಸುರಕ್ಷಾ ಯೋಜನೆಗಳು ಅಷ್ಟೆ ಅಲ್ಲದೇ ಇನ್ನು ಅನೇಕ ಯೋಜನೆಗಳನ್ನು ಈಗಾಗಲೇ ಜಾರಿಗೆ ತಂದಿದೆ. ಗ್ರಾಹಕರಿಗಾಗಿ ಅಂಚೆ ಇಲಾಖೆಯು ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ಹೆಚ್ಚಿನದಾದ ಮಾಹಿತಿಗಳನ್ನು ಪಡೆಯಲು ಸಮೀಪದಲ್ಲಿರುವ ಅಂಚೆ ಇಲಾಖೆಗೆ ಭೇಟಿ ನೀಡಿ ಹಾಗೂ ಅಂಚೆ ಇಲಾಖೆಯ ಅಧಿಕೃತವಾದ ವೆಬ್‌ಸೈಟ್‌ಗೆ ಲಾಗಿನ್ ಆಗಿ.
ಇತರೆ ವಿಷಯಗಳು:
ಆಧಾರ್ ಕಾರ್ಡ್ ಹೊಂದಿರುವವರಿಗೆ ಕೊನೆಯ ಅವಕಾಶ..!
ಆದಾಯ ತೆರಿಗೆಯಲ್ಲಿ ದೊಡ್ಡ ಬದಲಾವಣೆ! ಇಂದಿನಿಂದ ಹೊಸ ನಿಯಮ ಜಾರಿ