ಹಲೋ ಸ್ನೇಹಿತರೇ, ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಮದ್ಯ ಪ್ರಿಯರಿಗೆ ಶಾಕ್ ಮೇಲೆ ಶಾಕ್ ನೀಡುತ್ತಾ ಬಂದಿದ್ದು, ಇದೀಗ ಸರ್ಕಾರ ಮತ್ತೊಮ್ಮೆ ಮದ್ಯ ಬೆಲೆ ಹೊಸ ದರಪಟ್ಟಿ ಬಿಡುಗಡೆ ಮಾಡಲಿದೆ. ಹೌದು, ಅಕ್ಟೋಬರ್ ಮೊದಲ ವಾರದಿಂದಲೇ ಮತ್ತೆ ಪರಿಷ್ಕೃತ ದರ ಜಾರಿ ಮಾಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
2023ರ ಜುಲೈನಲ್ಲಿ ಮಂಡಿಸಿದ್ದ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯನವರು ಐಎಂಎಲ್ ಮೇಲೆ ಶೇ.20 ಮತ್ತು ಬಿಯರ್ ಮೇಲೆ ಶೇ.10 ಅಬಕಾರಿ ಸುಂಕ ಹೆಚ್ಚಿಸಿದ್ದರು. ಈಗ ಮತ್ತೊಮ್ಮೆ ಬಿಯರ್ ಬೆಲೆ ಏರಿಕೆ ಬಗ್ಗೆ ಅಬಕಾರಿ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಇದಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಅಕ್ಟೊಬರ್ 1 ರಿಂದ ಬೆಲೆ ಏರಿಕೆಯಾಗುವ ಸಾಧ್ಯತೆ ಖಚಿತವಾದಂತಿದೆ.
ಈ ಮದ್ಯ ಬೆಲೆ ಏರಿಕೆ ಹಿನ್ನಲೆ, ಸರ್ಕಾರದ ನಿರ್ಧಾರಕ್ಕೆ ಬಾರ್ ಮಾಲೀಕರು ಬೇಸರ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಬಿಯರ್ ಮಾರಾಟ ಹೆಚ್ಚಾದ ಸಂದರ್ಭದಲ್ಲಿ ಗ್ರಾಹಕರ ಜೊತೆಗೆ ಮಾರಾಟಗಾರರಿಗೂ ಪರಿಣಾಮ ಬೀಳಲಿದೆ. ಸರ್ಕಾರ ಏರಿಕೆ ಬದಲು ದರ ಇಳಿಕೆ ಬಗ್ಗೆ ಯೋಚನೆ ಮಾಡಿದರೆ ಹೆಚ್ಚು ಮಾರಾಟವಾಗಲಿದೆ. ಈ ಮೂಲಕ ಸರ್ಕಾರ ಮತ್ತು ಮಾಲೀಕರಿಗೆ ಅನೂಕೂಲವಾಗಲಿದೆ ಎನ್ನುತ್ತಿದ್ದಾರೆ.
ಇದನ್ನೂ ಸಹ ಓದಿ : ಅಂಚೆ ಕಚೇರಿ ಯೋಜನೆಯಲ್ಲಿ ಹೊಸ ನೀತಿ! ಅಕ್ಟೋಬರ್ 1 ರಿಂದ ಈ ರೂಲ್ಸ್ ಜಾರಿ
ಬೆಲೆ ಏರಿಕೆ ವಿವರಗಳನ್ನು ನೋಡುವುದಾದರೆ:
ಬಡ್ವೈಸರ್ ಪ್ರಿಮಿಯಂ: 200 ರಿಂದ 215
ಕೆಎಫ್ ಅಲ್ಟ್ರಾ: 199 ರಿಂದ 220
ಟ್ಯುಬರ್ಗ್ ಸ್ಟ್ರಾಂಗ್: 168 ರಿಂದ 180
ಯುಬಿ ಪ್ರಿಮೀಯಂ: 131 ರಿಂದ 143
ಯುಬಿ ಸ್ಟ್ರಾಂಗ್: 131 ರಿಂದ 142
ಕೆಎಫ್ ಪ್ರಿಮಿಯಂ: 168 ರಿಂದ 180
ಕೆಎಫ್ ಸ್ಟ್ರೋಮ್ : 177 ರಿಂದ 187
ಕೆಎಫ್ ಸ್ಟ್ರಾಂಗ್: 168 ರಿಂದ 180
ಇಷ್ಟೇ ಅಲ್ಲದೆ ಇನ್ನುಳಿದ ಬ್ರ‍್ಯಾಂಡ್‌ಗಳ ಮೇಲೂ ಸುಮಾರು 10 ರಿಂದ 20 ರೂ.ವರೆಗೂ ದರ ಏರಿಕೆಯಾಗುವ ಸಾಧ್ಯತೆ ಇದ್ದು, ಅಕ್ಟೋಬರ್ ಮೊದಲ ವಾರವೇ ಹೊಸ ದರಗಳು ಪರಿಷ್ಕರಣೆಗೊಳ್ಳುವ ಸಾಧ್ಯತೆ ಇದೆ.
ಇತರೆ ವಿಷಯಗಳು:
ಈ ಕೆಲಸ ಮಾಡದಿದ್ದರೆ ನಿಮಗೆ ಬರಲ್ಲ ಪಿಎಂ ಕಿಸಾನ್ 18 ನೇ ಕಂತಿನ ಹಣ!
ಮಹಿಳೆಯರಿಗೆ ಸಂತಸದ ಸುದ್ದಿ.!! ಕೇಂದ್ರ ಸರ್ಕಾರದಿಂದ ಸಿಗಲಿದೆ 11,000 ರೂ.
ರೈತರಿಗೆ ಸಂತಸದ ಸಿಹಿ ಸುದ್ದಿ.!! ಮೋದಿ ಸರ್ಕಾರದಿಂದ ಬಿಗ್ ಅಪ್ಡೇಟ್