ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ಬೆಂಗಳೂರಿನಲ್ಲಿ ಇರುವಂತಹ ಮತ್ತೊಂದು ಸಂಸ್ಥೆಯಲ್ಲಿ ಖಾಲಿ ಇರುವ ಉದ್ಯೋಗಗಳ ಬಗ್ಗೆ ಮಾಹಿತಿಯನ್ನು ತಿಳಿಸುತ್ತಿದ್ದೇವೆ. ಸದ್ಯ ಇದೀಗ ಬೆಂಗಳೂರಿನ ನಿಮಾನ್ಸ್ ನಲ್ಲಿ ಖಾಲಿ ಇರುವಂತಹ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತಿ ಹೊಂದಿದ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ನಿಮಾನ್ಸ್ ನಲ್ಲಿ ಖಾಲಿ ಇರುವಂತಹ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ನೇಮಕಾತಿಗೆ ಬೇಕಾದಂತಹ ಎಲ್ಲಾ ಅರ್ಹತೆಗಳನ್ನು ಹೊಂದಿರುವಂತಹ ಅಭ್ಯರ್ಥಿಗಳು ನಿಮಾನ್ಸ್ ನ ಅಧಿಕೃತ ಅಧಿ ಸೂಚನೆಯನ್ನು ಓದಿ ಆನಂತರ ಅರ್ಜಿಯನ್ನು ಸಲ್ಲಿಸಬಹುದು.
ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನೆರವಿಜ್ಞಾನ ಸಂಸ್ಥೆ ನೇಮಕಾತಿ ಬೆಂಗಳೂರು :
ಸದ್ಯ ಇದೀಗ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಖಾಲಿ ಇರುವಂತಹ ಹುದ್ದೆಗಳಿಗೆ ಅದೇ ಸೂಚನೆಯನ್ನು ಹೊರಡಿಸಲಾಗಿದೆ. ನಿಮಾನ್ಸ್ ರಿಕ್ರೂಟ್ಮೆಂಟ್ ಬೆಂಗಳೂರು ನೇಮಕಾತಿಗೆ ಸಂಬಂಧಿಸಿದಂತೆ ಅರ್ಹತೆಗಳು ಖಾಲಿ ಇರುವ ಹುದ್ದೆಗಳ ಸಂಖ್ಯೆ ಅರ್ಜಿ ಸಲ್ಲಿಸುವ ವಿಧಾನ ಪ್ರಮುಖ ದಿನಾಂಕಗಳು ವೇತನ ಶ್ರೇಣಿ ವಯಸ್ಸಿನ ಮಿತಿ ಹೀಗೆ ಹುದ್ದೆಗಳ ವಿವರವನ್ನು ಸಂಪೂರ್ಣವಾಗಿ ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.
ಹುದ್ದೆಗಳ ವಿವರ :
ನೇಮಕಾತಿ ಸಂಸ್ಥೆ | ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ |
ಖಾಲಿ ಇರುವ ಹುದ್ದೆಗಳ ಹೆಸರು | ಅನಿಮೇಟರ್ |
ಖಾಲಿ ಇರುವ ಒಟ್ಟು ಹುದ್ದೆಗಳ ಸಂಖ್ಯೆ | 02 |
ಉದ್ಯೋಗದ ಸ್ಥಳ | ಬೆಂಗಳೂರು ಕರ್ನಾಟಕ |
ಅರ್ಜಿ ಸಲ್ಲಿಸುವ ವಿಧಾನ | ಆನ್ಲೈನ್ ಮತ್ತು ಆಫ್ಲೈನ್ ಮೂಲಕ |
PDF ನೋಡಲು | ಕ್ಲಿಕ್ ಮಾಡಿ |
ಅಧಿಕೃತ ವೆಬ್ಸೈಟ್ | https://nimhans.ac.in/ |
ವಿದ್ಯಾರ್ಹತೆ :
ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಖಾಲಿ ಇರುವಂತಹ ಆನಿಮೇಟರ್ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಗಳಿಂದ ಈ ಕೆಳಗಿನ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿರಬೇಕು.
- MSc.
- ಕಂಪ್ಯೂಟರ್ ಸೈನ್ಸ್ ಮತ್ತು ಮಾಹಿತಿ ತಂತ್ರಜ್ಞಾನದಲ್ಲಿ B.Tech.
- ಅನಿಮೇಶನ್ ನಲ್ಲಿ ಪದವಿ.
ಅನುಭವದ ಮಾಹಿತಿ :
ಅನಿಮೇಟರ್ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳಿಗೆ ಅನುಭವದ ಬಗ್ಗೆ ವಿವರಗಳನ್ನು ಕೇಳಲಾಗಿದೆ.
- 2D /3D ಅನಿಮೇಶನ್ ನಲ್ಲಿ ಪರಿಣಿತಿಯನ್ನು ಪ್ರದರ್ಶಿಸುವಂತಹ ಬಲವಾದ ಪೋರ್ಟ್ ಪೋಲಿಯೋದೊಂದಿಗೆ ಕನಿಷ್ಠ ಒಂದು ವರ್ಷಗಳ ವೃತ್ತಿಪರ ಅನುಭವವನ್ನು ಅನಿಮೇಷನ್ ನಲ್ಲಿ ಹೊಂದಿರಬೇಕು.
ವಯಸ್ಸಿನ ಮಿತಿ :
ಬೆಂಗಳೂರಿನ ನಿಮಾನ್ಸ್ ನೇಮಕಾತಿ ಅಧಿಸೂಚನೆಯ ಪ್ರಕಾರ ಗರಿಷ್ಠ ವಯಸ್ಸಿನ ಮಿತಿಯನ್ನು ಅನಿಮೇಟರ್ ಹುದ್ದೆಗೆ ನಿಗದಿಪಡಿಸಲಾಗಿದೆ.
- ಗರಿಷ್ಠ ವಯಸ್ಸು : 35 ವರ್ಷಗಳು
ಅರ್ಜಿ ಶುಲ್ಕದ ವಿವರ :
ಬೆಂಗಳೂರಲ್ಲಿ ನಿಮಾನ್ಸ್ ನೇಮಕಾತಿ ಅಧಿಸೂಚನೆ ಪ್ರಕಾರ ಅರ್ಜಿಯನ್ನು ಸಲ್ಲಿಸುವ ಸಂದರ್ಭದಲ್ಲಿ ಯಾವುದೇ ರೀತಿಯಾದ ಅರ್ಜಿ ಶುಲ್ಕವನ್ನು ಅಭ್ಯರ್ಥಿಗಳು ಪಾವತಿ ಮಾಡುವಂತಿಲ್ಲ.
ವೇತನ ಶ್ರೇಣಿ :
ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ ನೇಮಕಾತಿ ಅಧಿ ಸೂಚನೆಯ ಪ್ರಕಾರ ಅನಿಮೇಟರ್ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 35,000 ಮಾಸಿಕ ವೇತನವನ್ನು ನೀಡಲಾಗುತ್ತದೆ.
ಇದನ್ನು ಓದಿ : HESCOM : ವಿದ್ಯುತ್ ಸರಬರಾಜು ಕಂಪನಿಯಲ್ಲಿ ಉದ್ಯೋಗಾವಕಾಶ : ಅರ್ಜಿ ಸಲ್ಲಿಸಲು ಇಲ್ಲಿದೆ ಡೈರೆಕ್ಟ್ ಲಿಂಕ್
ಆಯ್ಕೆ ವಿಧಾನ :
ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ ಯಲ್ಲಿ ಖಾಲಿ ಇರುವ ಹುದ್ದೆಗೆ ಅಭ್ಯರ್ಥಿಗಳನ್ನ ಅಧಿಸೂಚನೆಯ ಪ್ರಕಾರ ಈ ಕೆಳಗಿನ ವಿಧಾನದ ಮೂಲಕ ಆಯ್ಕೆ ಮಾಡಲಾಗುತ್ತದೆ.
- ಲಿಖಿತ ಪರೀಕ್ಷೆ.
- ಸಂದರ್ಶನ ಅರ್ಜಿ ಸಲ್ಲಿಸುವ ಪ್ರಕ್ರಿಯೆ.
ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ ನೇಮಕಾತಿ ಅಧಿಸೂಚನೆಯ ಪ್ರಕಾರ ಆನಿಮೇಟರ್ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳಿಗೆ ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಅವಕಾಶ ಕಲ್ಪಿಸಲಾಗಿದೆ.
- ಮೊದಲು ಆನ್ಲೈನ್ ಮೂಲಕ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.
- ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಳ್ಳಲು ಅಧಿಕೃತ ವೆಬ್ಸೈಟ್ : https://nimhans.ac.in/
- ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡ ನಂತರ ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಸಂದರ್ಶನಕ್ಕಾಗಿ ಹಾಜರಾಗಬೇಕು.
ವಿಳಾಸ :
Board room and exam hall
NBRC 4th FLOOR- NIMHANS
Bengaluru 29 -Karnataka
ಪ್ರಮುಖ ದಿನಾಂಕಗಳು :
ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ ನೇಮಕಾತಿ ಅಧಿ ಸೂಚನೆಯ ಪ್ರಕಾರ ಅಭ್ಯರ್ಥಿಗಳಿಗೆ ಪ್ರಮುಖ ದಿನಾಂಕಗಳು,
- ಅಧಿ ಸೂಚನೆಯನ್ನು ಬಿಡುಗಡೆ ಮಾಡಿರುವ ದಿನಾಂಕ : 07-08-2024
- ವಾಕ್ ಇನ್ ದಿನಾಂಕ: 22-08-2024
ನಿಮಗೆ ತಿಳಿದಿರುವಂತಹ ಎಲ್ಲಾ ನಿರುದ್ಯೋಗ ಯುವಕ ಯುವತಿಯರಿಗೆ ಬೆಂಗಳೂರಿನ ನಿಮಾನ್ಸ್ ನಲ್ಲಿ ಖಾಲಿ ಇರುವಂತಹ ಹುದ್ದೆಗಳಿಗೆ ಸಂಬಂಧಿಸಿದಂತಹ ಈ ಮಾಹಿತಿಯನ್ನು ಶೇರ್ ಮಾಡಿ.
ಇದರಿಂದ ಅವರೆನಾದರೂ ಈ ಹುದ್ದೆಗಳಲ್ಲಿ ಆಸಕ್ತಿ ಮತ್ತು ಅರ್ಹತೆಯನ್ನು ಹೊಂದಿದ್ದರೆ ಅವರಿಗೆ ಈ ಲೇಖನದ ಮಾಹಿತಿಯು ಹೆಚ್ಚು ಉಪಯೋಗವಾಗಲಿದೆ ಧನ್ಯವಾದಗಳು.
ಇತರೆ ವಿಷಯಗಳು :
- ರಾಮನಗರ ಜಿಲ್ಲೆಯ ನಿಮಾನ್ಸ್ ನಲ್ಲಿ ಉದ್ಯೋಗಾವಕಾಶ : ತಕ್ಷಣ ಅರ್ಜಿ ಸಲ್ಲಿಸಿ
- DRDO Recruitment : ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ನೇಮಕಾತಿ ತಕ್ಷಣ ಅರ್ಜಿ ಸಲ್ಲಿಸಿ