ಹಲೋ ಸ್ನೇಹಿತರೇ, ‘ಬೇಟಿ ಪಡಾವೋ-ಬೇಟಿ ಬಚಾವೋ’ ಕಾರ್ಯಕ್ರಮದ ಅಡಿಯಲ್ಲಿ ಸರ್ಕಾರವು ಹೆಣ್ಣು ಮಕ್ಕಳಿಗಾಗಿ ಸುಕನ್ಯಾ ಸಮೃದ್ಧಿ ಉಳಿತಾಯ ಯೋಜನೆಯನ್ನು ಪ್ರಾರಂಭಿಸಿತು. ಈ ಯೋಜನೆಯಡಿಯಲ್ಲಿ, 10 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಗುವಿನ ಹೆಸರಿನಲ್ಲಿ ಖಾತೆಯನ್ನು ತೆರೆಯಬಹುದು.
ಈ ಯೋಜನೆಯು ಹೆಚ್ಚಿನ ಬಡ್ಡಿದರ ಮತ್ತು ಹಲವಾರು ತೆರಿಗೆ ಪ್ರಯೋಜನಗಳನ್ನು ನೀಡುತ್ತದೆ. ಈ ಯೋಜನೆಯಲ್ಲಿ ಪೋಷಕರು ಹೆಣ್ಣು ಮಗುವಿನ ಹೆಸರಿನಲ್ಲಿ ಕನಿಷ್ಠ 250 ರೂ. ಮತ್ತು ಗರಿಷ್ಠ 1,50,000 ವರೆಗೆ ಠೇವಣಿ ಮಾಡಬಹುದು.
ಇದೀಗ ಅಕ್ಟೋಬರ್ 1,2024 ರಿಂದ ಕೆಲವು ರಾಷ್ಟ್ರೀಯ ಸಣ್ಣ ಉಳಿತಾಯ ಯೋಜನೆಗಳ ಮಾರ್ಗಸೂಚಿಗಳನ್ನು ಅಂಚೆ ಕಚೇರಿ ಮೂಲಕ ಬಿಡುಗಡೆ ಮಾಡಲಾಗಿದ್ದು, ಈ ಹೊಸ ಮಾರ್ಗ ಸೂಚಿಗಳು ಸುಕನ್ಯಾ ಸಮೃದ್ಧಿ ಖಾತೆಯನ್ನು ಹೊಂದಿರುವ ಗ್ರಾಹಕರ ಮೇಲೆ ಪರಿಣಾಮ ಬೀಳಲಿದೆ.
ಇದನ್ನೂ ಸಹ ಓದಿ : ದೇಶದ ಜನತೆಗೆ ಬೆಳ್ಳಂಬೆಳಗ್ಗೆಯೇ ಶಾಕಿಂಗ್ ಸುದ್ದಿ: ದಿಢೀರ್ LPG ಬೆಲೆ ಏರಿಕೆ!
ಹೌದು, ಇನ್ಮೇಲೆ ಒಂದು ಮಗುವಿನ ಹೆಸರಿನಲ್ಲಿ ಒಂದೇ ಖಾತೆಗೆ ಅವಕಾಶ. ಅದು ಕೂಡಾ ಪೋಷಕರು ಅಥವಾ ಕಾನೂನು ಪಾಲರು ತೆರೆಯಬೇಕು. ಅದು ಬಿಟ್ಟು ಅಜ್ಜಿಯರು ತೆರೆಯುವಂತಿಲ್ಲ. ಯೋಜನೆಯ ನಿಯಮಗಳನ್ನು ಮುರಿದರೆ ಖಾತೆಯನ್ನು ಮುಚ್ಚಲಾಗುತ್ತದೆ.
ಒಂದುವೇಳೆ ಮಗುವಿನ ಹೆಸರಿನಲ್ಲಿ ತೆರೆಯಲಾದ ತಪ್ಪು ಖಾತೆಗಳನ್ನು ಸರಿಪಡಿಸಿದರೆ ಮಾತ್ರ ಹೂಡಿಕೆ ಮೇಲೆ ಬಡ್ಡಿ ನೀಡಲಾಗುತ್ತದೆ. ಇಲ್ಲವಾದರೆ ಬಡ್ಡಿ ಶೂನ್ಯವಾಗುವುದು. ಈ ನಿಟ್ಟಿನಲ್ಲಿ ಖಾತೆದಾರರು ಅಥವಾ ಪೋಷಕರಿಂದ ಪ್ಯಾನ್ ಮತ್ತು ಆಧಾರ್ ಸಂಖ್ಯೆಯನ್ನು ಸಂಗ್ರಹಿಸಲು ಎಲ್ಲಾ ಅಂಚೆ ಕಚೇರಿಗಳಿಗೆ ತಿಳಿಸಲಾಗಿದೆ.
ಇತರೆ ವಿಷಯಗಳು:
ಆಧಾರ್ ಕಾರ್ಡ್ ಹೊಂದಿರುವವರಿಗೆ ಕೊನೆಯ ಅವಕಾಶ..!
ರಾಜ್ಯದ ರೈತರಿಗೆ ಗಣೇಶ ಹಬ್ಬದ ಬಂಪರ್ ಗಿಫ್ಟ್! ಕೇಂದ್ರದಿಂದ ಮಹತ್ವದ ಘೋಷಣೆ
ಮುಂದಿನ 5 ದಿನ ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆ : ರೆಡ್ ಅಲರ್ಟ್ ಜಾರಿ